KAGGA Summary
This contains summary of few Kagga from different authors ಶ್ರೀ ರವಿತಿರುಮಲೈ ಅವರ ಕಗ್ಗರಸಧಾರೆಯಿಂದ ಮೆರೆಯುವುವು ನೂರಾರು ಮೈಮೆಗಳು ಸೃಷ್ಟಿಯಲಿ । ಧರಣಿಯವು, ಗಗನದವು, ಮನುಜಯತ್ನದವು ॥ ಪಿರಿದೆಂಬೆನವುಗಳೊಳು ಧರುಮವರಿತವನೊಲುಮೆ । ಅರಿವುಳ್ಳೊಲುಮೆ ಪಿರಿದು - ಮಂಕುತಿಮ್ಮ ॥ ೭೨೧ ॥ ಪಿರಿದೆಂಬೆನವುಗಳೊಳು= ಪಿರಿದು+ಎಂಬ+ಅನುವುಗಳ+ಒಳು, ಧರುಮವರಿತವನೊಲುಮೆ=ಧರುಮವ+ಅರಿತ+ಅವನ+ಒಲುಮೆ, ಅರಿವುಳ್ಳೊಲುಮ=ಅರಿವು+ಉಳ್ಳ+ಒಲುಮೆ,ಅನುವುಗಳ=ಅನುಕೂಲತೆಗಳ, ಮೈಮೆಗಳು = ಮಹಿಮೆಗಳು, ಪಿರಿದು=ಹಿರಿಯದು ಈ ಜಗತ್ತಿನ ಸೃಷ್ಟಿಯಲಿ ನೂರಾರು ಮಹಿಮೆಗಳಿವೆ. ಇವುಗಳಲ್ಲಿ ಭೂಮಿಯದು ಹಲವು ಗಗನದ್ದು ಹಲವು, ಮನುಷ್ಯ ಪ್ರಯತ್ನದ ಸಾಧನೆಗಳಲ್ಲಿ, ಮಹತ್ತಾದ ಸಾಧನೆ ‘ಧರ್ಮವನ್ನು’ ಅರಿತವನ ಒಲುಮೆ ಅಥವಾ ಪ್ರೀತಿ. ಅಂತಹ ಧರ್ಮಯುಕ್ತವಾದ ಪ್ರೀತಿಯಲ್ಲಿ ‘ಅರಿವು’ ಎಂದರೆ ಜ್ಞಾನವೂ ಸೇರಿಕೊಂಡರೆ ಅದು ಅತೀ ಉತ್ತಮವಾದ ಸಾಧನೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು. ಅವುಗಳಲ್ಲಿ ಗಗನದಲ್ಲಿನ ತೇಜಫುಂಜಗಳು, ನಕ್ಷತ್ರಗಳು, ಗ್ರಹಗಳು, ಸೂರ್ಯ ಚಂದ್ರರು, ಮಳೆ, ಗಾಳಿ, ಬೆಳಕು ಇತ್ಯಾದಿ, ಭೂಮಿಯ ಮೇಲಿನ ಕಡಲು, ಗಿರಿ ಪರ್ವತಗಳು, ನದಿ, ಕಾಡುಗಳು, ಜಲಪಾತಗಳು,ಕೋಟಿ ಕೋಟಿ ವಿಧದ ಗಿಡ,ಮರ, ಸಸ್ಯರಾಶಿಗಳು, ಕಗ, ಮೃಗ, ಜಲಚರ ಇತ್ಯಾದಿಗಳು. ಸೃಷ್ಟಿಯಲ್ಲಿರುವ ಪ್ರಾಣಿಗಳಲ್ಲಿ ಮನುಷ್ಯ ಶ್ರೇಷ್ಠ ಪ್ರಾಣಿ. ಮಿಕ್ಕೆಲ್ಲ ಪ್ರಾಣಿಗಳಿಗಿಂತ ಅವನ ಅವಿಷ್ಕಾರಗ...